Monday, 29 August 2016

ಸಾಮಾನ್ಯ ಜ್ಞಾನ

ಫೋರ್ಬ್ಸ್ ಬಿಡುಗಡೆ ಮಾಡಿರುವ,  2016ನೇ ಸಾಲಿನ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ 20 ಚಿತ್ರನಟರ ಪಟ್ಟಿಯಲ್ಲಿ  ಬಾಲಿವುಡ್ ನಟರಾದ ಶಾರುಖ್ ಖಾನ್, ಅಕ್ಷಯ್‌ ಕುಮಾರ್‌, ಅಮಿತಾಭ್ ಬಚ್ಚನ್ ಮತ್ತು ಸಲ್ಮಾನ್ ಖಾನ್ ಸ್ಥಾನ ಪಡೆದಿದ್ದಾರೆ.

ಸುಮಾರು  220 ಕೋಟಿ ಸಂಭಾವನೆ ಪಡೆಯುವ ಮೂಲಕ ಶಾರುಖ್ ಖಾನ್ ಮತ್ತು ಡ್ವೇನಿ ಜೆ.ಆರ್ 8ನೇ ಸ್ಥಾನ ಹಂಚಿಕೊಂಡಿದ್ದಾರೆ. ಸುಮಾರು 210 ಕೋಟಿ ಸಂಭಾವನೆ ಪಡೆದ ಹಾಲಿವುಡ್ ನಟ ಪಿಟ್ ಮತ್ತು ಭಾರತೀಯ ನಟ ಅಕ್ಷಯ್‌ ಕುಮಾರ್ 10ನೇ ಸ್ಥಾನದಲ್ಲಿದ್ದಾರೆ. ಸಲ್ಮಾನ್ ಖಾನ್ 14 ಸ್ಥಾನದಲ್ಲಿದ್ದರೆ, ಅಮಿತಾಭ್  ಬಚ್ಚನ್  18ನೇ  ಸ್ಥಾನ ಪಡೆದಿದ್ದಾರೆ.

# ಸಿಂಗಾಪುರದಲ್ಲಿ ಚಾಲಕ ರಹಿತ ಟ್ಯಾಕ್ಸಿ:-
ವಿಶ್ವದ ಮೊದಲ ಚಾಲಕ ರಹಿತ ಟ್ಯಾಕ್ಸಿ  ಸೇವೆ ಸಿಂಗಪುರದಲ್ಲಿ ಗುರುವಾರ ಆರಂಭವಾಗಿದೆ. ಪ್ರಾಯೋಗಿಕವಾಗಿ ಇಲ್ಲಿನ ಸಂಶೋಧನಾ ಕ್ಯಾಂಪಸ್‌ ಆವರಣದಲ್ಲಿ   ಮಾತ್ರ ಈ ‘ರೋಬೊ ಟ್ಯಾಕ್ಸಿ’ ಸೇವೆ ಆರಂಭಿಸಲಾಗಿದೆ. ಪ್ರಯೋಗ ಯಶಸ್ವಿಯಾದರೆ  2018ರ ವೇಳೆಗೆ ನಗರದ ಹೃದಯ ಭಾಗದಲ್ಲಿ ಈ ಸೇವೆ ಜಾರಿಮಾಡಲಾಗುವುದು ಎಂದು ಟ್ಯಾಕ್ಸಿಗೆ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿರುವ ಅಮೆರಿಕದ ಸ್ಟಾರ್ಟ್‌ ಅಫ್‌ ನುಟೊನೊಮಿ ಹೇಳಿದೆ.
19ನೇ ಸಾರ್ಕ್‌ ಸಮ್ಮೇಳನ ನ.9 ಮತ್ತು 10ರಂದು ಇಸ್ಲಾಮಾಬಾದ್‌ನಲ್ಲಿ ನಡೆಯಲಿದೆ. ‘ಸಮ್ಮೇಳನದಲ್ಲಿ ಭಾಗವಹಿಸುವಂತೆ ಪ್ರಧಾನಿ ನವಾಜ್‌ ಷರೀಫ್‌ ಎಲ್ಲ ಸಾರ್ಕ್‌ ಸದಸ್ಯ ರಾಷ್ಟ್ರಗಳಿಗೆ ಆಹ್ವಾನ ನೀಡಿದ್ದಾರೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ತಿಳಿಸಿದೆ. ಗಡಿಯಾಚೆಗಿನ ಭಯೋತ್ಪಾದನೆ ಕಾರಣಕ್ಕೆ ಭಾರತ, ಪಾಕ್‌ ನಡುವಿನ ಬಾಂಧವ್ಯಕ್ಕೆ ಧಕ್ಕೆಯಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಸಾರ್ಕ್‌ ಸಮ್ಮೇಳನದಲ್ಲಿ ಭಾಗವಹಿಸುತ್ತಾರೋ ಇಲ್ಲವೊ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

‘ನೋ ಈಜಿ ಡೇ’ ಕೃತಿಯ ಲೇಖಕನಿಗೆ ಭಾರಿ ದಂಡ

ಉಗ್ರ ಒಸಾಮ ಬಿನ್‌ ಲಾಡೆನ್‌ ವಿರುದ್ಧದ ರಹಸ್ಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ನೌಕಾಪಡೆಯ ‘ಸೀಲ್’ ತಂಡದ ಕಮಾಂಡೊ  ಪೂರ್ವಾನುಮತಿ ಪಡೆಯದೆ ಕೃತಿಯನ್ನು ಮಾರಾಟ ಮಾಡಿದ್ದಕ್ಕಾಗಿ ಭಾರೀ ಮೊತ್ತದ ದಂಡ ಪಾವತಿಸಲು ಒಪ್ಪಿಕೊಂಡಿದ್ದಾರೆ.

Wednesday, 24 August 2016

ಕನ್ನಡ ವರ್ಣಮಾಲೆ


ನಮ್ಮ ಆಧುನಿಕ ಕನ್ನಡ ವರ್ಣಮಾಲೆಯಲ್ಲಿ ಒಟ್ಟು ೪೯ ಅಕ್ಷರಗಳಿವೆ. ಅವುಗಳೆಂದರೆ:-

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ

ಕ್ ಖ್ ಗ್ ಘ್ ಙ್
ಚ್ ಛ್ ಜ್ ಝ್ ಞ್
ಟ್ ಠ್ ಡ್ ಢ್ ಣ್
ತ್ ಥ್ ದ್ ಧ್ ನ್
ಪ್ ಫ್ ಬ್ ಭ್ ಮ್

ಯ್ ರ್ ಲ್ ವ್ ಶ್ ಷ್ ಸ್ ಹ್ ಳ್


ಅಕ್ಷರಗಳ ವರ್ಗೀಕರಣ
 


ಕನ್ನಡ ವರ್ಣಮಾಲೆಯಲ್ಲಿ ೪೯ ಅಕ್ಷರಗಳಿದ್ದು, ವರ್ಣಮಾಲೆಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ:-
ಸ್ವರಗಳು (೧೩)
ವ್ಯಂಜನಗಳು (೩೪)
ಯೋಗವಾಹಗಳು (೦೨)

ಸ್ವರಗಳು (೧೩):-
ಸ್ವತಂತ್ರವಾಗಿ ಉಚ್ಚರಿಸಲಾಗುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತ್ತಾರೆ.

ಕನ್ನಡದಲ್ಲಿರುವ ಒಟ್ಟು ಸ್ವರಗಳ ಸಂಖ್ಯೆ ೧೩, ಅವುಗಳೆಂದರೆ

ಅ ಆ ಇ ಈ ಉ ಊ ಋ ಎ ಏ ಒ ಓ ಔ

ಸ್ವರಗಳಲ್ಲಿ ಎರೆಡು ವಿಧ. ಅವುಗಳೆಂದರೆ:-
ಹ್ರಸ್ವಸ್ವರ (೦೬)
ದೀರ್ಘಸ್ವರ (೦೭)

ಹ್ರಸ್ವಸ್ವರಗಳು :- ಒಂದು ಮಾತ್ರೆಯ ಕಾಲದಲ್ಲಿ ಅಥವ ಕಡಿಮೆ ಸಮಯದಲ್ಲಿ ಉಚ್ಚರಿಸುವ ಅಕ್ಷರಗಳನ್ನು ಹ್ರಸ್ವಸ್ವರಗಳು ಎನ್ನುವರು.

ಕನ್ನಡದಲ್ಲಿರುವ ೬ ಹ್ರಸ್ವಸ್ವರಗಳೆಂದರೆ : ಅ ಇ ಉ ಋ ಎ ಒ

ದೀರ್ಘಸ್ವರಗಳು :- ದೀರ್ಘವಾಗಿ ಅಂದರೆ ಎರೆಡು ಮಾತ್ರೆಯ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳನ್ನು ದೀರ್ಘಸ್ವರಗಳು ಎನ್ನುವರು.

ಕನ್ನಡ ವರ್ಣಮಾಲೆಯಲ್ಲಿರುವ ೭ ದೀರ್ಘಸ್ವರಗಳೆಂದರೆ : ಆ ಈ ಊ ಏ ಐ ಓ ಔ

ಸಂಧ್ಯಾಕ್ಷರಗಳು :- ಎರೆಡು ಬೇರೆ ಬೇರೆ ಸ್ವರಗಳ ಸಂಯೋಗದಿಂದ ಉಂಟಾಗುವ ದೀರ್ಘ ಸ್ವರಗಳಿಗೆ ’ಸಂಧ್ಯಾಕ್ಷರಗಳು’ ಎನ್ನುವರು.

ಕನ್ನಡದಲ್ಲಿ ’ಐ’ ಮತ್ತು ’ಔ’ ಎಂಬೆರಡು ಸಂಧ್ಯಾಕ್ಷರಗಳಿದ್ದು ’ಅ, ಇ’ ಎಂಬ ಸ್ವರಗಳ ಸಂಯೋಗದಿಂದಲೂ, ’ಔ’ ಎಂಬ ಸಂಧ್ಯಾಕ್ಷರವು ’ಅ, ಉ’ ಎಂಬ ಸ್ವರಗಳ ಸಂಯೋಗದಿಂದಲೂ ಉಂಟಾಗುವುದು.

ವ್ಯಂಜನಗಳು (೩೪) :- ಸ್ವರಗಳ ಸಹಾಯದಿಂದ ಸ್ಪಷ್ಟವಾಗಿ ಉಚ್ಚರಿಸಲ್ಪಡುವ ವರ್ಣಗಳಿಗೆ ವ್ಯಂಜನಗಳು ಎನ್ನುವರು.

ವ್ಯಂಜನಗಳಲ್ಲಿ ಎರೆಡು ವಿಧಗಳಿವೆ. ಅವುಗಳೆಂದರೆ :-

೧) ವರ್ಗೀಯ ವ್ಯಂಜನಗಳು. (೨೫)

೨) ಅವರ್ಗೀಯ ವ್ಯಂಜನಗಳು. (೦೯)

ವರ್ಗೀಯ ವ್ಯಂಜನಗಳು :

ವರ್ಗ ಎಂದರೆ ಗುಂಪು, ಸಮೂಹ ಎಂದರ್ಥ. ಒಂದು ನಿರ್ದಿಷ್ಟ ವರ್ಗಕ್ಕೆ ಸೇರಿದ ಅಕ್ಷರಗಳನ್ನು ವರ್ಗೀಯ ವ್ಯಂಜನ ಎನ್ನುವರು.

ಕನ್ನಡದಲ್ಲಿ ಒಟ್ಟು ೨೫ ವರ್ಗೀಯ ವ್ಯಂಜನಗಳಿವೆ. ಅವುಗಳೆಂದರೆ :-

ಕ್ ಖ್ ಗ್ ಘ್ ಙ್ - ’ಕ’ ವರ್ಗ.

ಚ್ ಛ್ ಜ್ ಝ್ ಞ್ - ’ಚ’ ವರ್ಗ.

ಟ್ ಠ್ ಡ್ ಢ್ ಣ್ - ’ಟ’ ವರ್ಗ.

ತ್ ಥ್ ದ್ ಧ್ ನ್ - ’ತ’ ವರ್ಗ.

ಪ್ ಫ್ ಬ್ ಭ್ ಮ್ - ’ಪ’ ವರ್ಗ.

’ಕ’ ವರ್ಗದ ವ್ಯಂಜನಗಳು ಗಂಟಲಿನಿಂದ, ’ಚ’ ವರ್ಗದ ವ್ಯಂಜನಗಳು ಅಂಗುಳದಿಂದ, ’ಟ್’ ವರ್ಗದ ವ್ಯಂಜನಗಳು ಒಳಬಾಯಿಯ ಮೇಲ್ಬಾಗದಿಂದ, ’ತ’ ವರ್ಗದ ವ್ಯಂಜನಗಳು ಹಲ್ಲುಗಳಿಂದ, ’ಪ’ ವರ್ಗದ ವ್ಯಂಜನಗಳು ತುಟಿಯಿಂದಲೂ ಉಚ್ಚರಿಸಲ್ಪಡುತ್ತವೆ.

ವರ್ಗೀಯ ವ್ಯಂಜನಗಳಲ್ಲಿ ನಾವು ಮೂರು ವಿಧಗಳನ್ನು ಕಾಣುತ್ತೇವೆ. ಅವುಗಳೆಂದರೆ :-

೧) ಅಲ್ಪಪ್ರಾಣಗಳು : ಕಡಿಮೆ ಉಸಿರಿನ ಸಹಾಯದಿಂದ ಉಚ್ಚರಿಸಲ್ಪಡುವ ವರ್ಗೀಯ ವ್ಯಂಜನಗಳಿಗೆ ’ಅಲ್ಪಪ್ರಾಣಗಳು’ ಎನ್ನುವರು.

ಕನ್ನಡದಲ್ಲಿ ’ ಕ್, ಗ್, ಚ್, ಜ್, ಟ್, ಡ್, ತ್, ದ್, ಪ್, ಬ್ ’ ಎಂಬ ೧೦ ಅಲ್ಪಪ್ರಾಣಗಳಿರುವವು.

೨) ಮಹಾಪ್ರಾಣಗಳು: ಹೆಚ್ಚು ಉಸಿರಿನ ಸಹಾಯದಿಂದ ಉಚ್ಚರಿಸಲ್ಪಡುವ ವರ್ಗೀಯ ವ್ಯಂಜನಗಳಿಗೆ ’ಮಹಾಪ್ರಾಣಗಳು’ ಎನ್ನುವರು.

ಕನ್ನಡದಲ್ಲಿ ’ ಖ್, ಘ್, ಛ್, ಝ್, ಠ್, ಢ್, ಥ್, ಧ್, ಫ್, ಭ್ ’ ಎಂಬ ೧೦ ಮಹಾಪ್ರಾಣಾಕ್ಷರಗಳಿವೆ.

೩) ಅನುನಾಸಿಕಗಳು : ಮೂಗಿನ ಸಹಾಯದಿಂದ ಉಚ್ಚರಿಸಲ್ಪಡುವ ವರ್ಗೀಯ ವ್ಯಂಜನಗಳಿಗೆ ಅನುನಾಸಿಕಗಳು ಎನ್ನುವರು.

ಕನ್ನಡದಲ್ಲಿ ’ ಙ್, ಞ್, ಣ್, ನ್, ಮ್ ’ ಎಂಬ ೫ ಅನುನಾಸಿಕಗಳು ಇವೆ.

ಯೋಗವಾಹಗಳು :- ’ಯೋಗ’ ಎಂದರೆ ಸಂಬಂಧವನ್ನು , ’ವಾಹ’ ಎಂದರೆ ಹೊಂದಿರವುದು ಎಂದರ್ಥ.
ಕನ್ನಡದಲ್ಲಿ ಎರೆಡು ಯೋಗವಾಹಗಳಿವೆ. ಅವುಗಳೆಂದರೇ 
ಅಂ - ಅನುಸ್ವಾರ
ಅ: - ವಿಸರ್ಗ

Monday, 1 August 2016

 ಜೀವಕೋಶ ಅಧ್ಯಯನ 
# ಜೀವಕೋಶಗಳು ಜೀವಿಯಾ ಒಟ್ಟಾರೆ ಅಭಿವೃದ್ಧಿಗೆ ಸಹಕರಿಸುವಂತಹ, ಪೋಷಣೆ, ಉಸಿರಾಟ ಮತ್ತು ಕೋಶ ವಿಭಜನೆಗಳಂತಹ ಕಾರ್ಯಗಳನ್ನು ನಿರ್ವಹಿಸುತ್ತವೆ. ಆದ್ದರಿಂದ, ಜೀವಕೋಶಗಳು ಜೀವಿಯ ರಚನಾತ್ಮಕ ಮತ್ತು ಕಾರ್ಯಾತ್ಮಕ ಮೂಲ ಘಟಕ.
# ಬಹಹುಕೋಶಿಯ ಜೀವಿಗಳಲ್ಲಿ ಜೀವಕೋಶಗಳು ಕೆಲವು ನೂರುಗಳಿಂದ ಹಲವು ಬಿಲಿಯನ್ ಗಳವರೆಗೂ ಇರಬಹುದು.
ವಯಸ್ಕ ಮಾನವನ ದೇಹದಲ್ಲಿ ಅನೇಕ ಟ್ರಿಲಿಯನ್ ಜೀವಕೋಶಗಳಿರುತ್ತವೆ.
1 ಮಿಲಿಯನ್ = 10,00,000 (106 )
1 ಬಿಲಿಯನ್ = 1000,000,000 (109 )
1 ಟ್ರಿಲಿಯನ್ = 1000,000,000,000 (1012 )

# ಜರ್ಮನಿಯ ಸಸ್ಯಶಾಸ್ತ್ರಜ್ಙ ಶ್ಲೀಡನ್ ಮತ್ತು ಪ್ರಾಣಿಶಾಸ್ತ್ರಜ್ಙ ಪ್ವಾನ್ ಒಟ್ಟಾಗಿ 1839 ರಲ್ಲಿ"ಜೀವಕೋಶ ಸಿದ್ಧಾಂತ' ವನ್ನು ಮಂಡಿಸಿದರು.
ಸಿದ್ಧಾಂತದ ಪ್ರಕಾರ:
1. ಜೀವಿಗಳ ದೇಹವು ಒಂದು ಅಥವಾ ಹೆಚ್ಚು ಜೀವಕೋಶಗಳಿಂದಾಗಿವೆ.
2. ಹೊಸ ಜೀವಕೋಶಗಳು ಈಗಾಗಲೇ ಅಸ್ತಿತ್ವದಲ್ಲಿರುವ ಜೀವಕೋಶಗಳ ವಿಭಜನೆಯಿಂದ ಹುಟ್ಟುತ್ತವೆ.

# ಜೀವಕೋಶಗಳು ಬರೀಗಣ್ಣಿಗೆ ಕಾಣಿಸುವುದಿಲ್ಲ. ಅವನ್ನು ಸೂಕ್ಷದರ್ಶಕದ ಮೂಲಕ ನೋಡಬೇಕು. ಜೀವಕೋಶಗಳ ಗಾತ್ರವನ್ನು ಅಳೆಯಲು "ಮೈಕ್ರಾನ್" ಅನ್ನು ಬಳಸುತ್ತೇವೆ. ಒಂದು ಮೈಕ್ರಾನ್ 1/1000 ಮಿಲಿಮೀಟರ್ ಗೆ ಸಮ.

# ಕೋಶಪೂರೆ : ಜೀವಕೋಶವು ಕೋಶಪೊರೆಯಿಂದ ಆವೃತವಾಗಿದೆ ಇದನ್ನು ಪ್ಲಾಸ್ಮಾಪೊರೆ ಎಂದು ಕರೆಯಯುವರು. ಇದು ಜೀವಕೋಶದ ಒಳಗಿನ ಭಾಗಗಳನ್ನು ಹೊರಗಿನ ಪರಿಸರದಿಂದ ಬೇರ್ಪಡಿಸುತ್ತದೆ. ಜೀವಕೋಶದ ನಿರ್ದಿಷ್ಟ ಆಕಾರವನ್ನು ಕಾಪಾಡುತ್ತದೆ. ಈ ಪೊರೆಯು ಕೋಶದ ಹೊರಹೋಗುವ ಮತ್ತು ಒಳಬರುವ ವಸ್ತುಗಳ ಚಲನೆಯನ್ನು ನಿಯಂತ್ರಿಸುತ್ತದೆ. ಆದ್ದರಿಂದ ಈ ಪೊರೆಯನ್ನು 'ಅರೆಪಾರಕ ಪೊರೆ' (semipermeable membrane) ಎನ್ನುವರು.

# ಜೀವಕೋಶಗಳು ಪ್ಲಾಸ್ಮಾಪೊರೆಯ ಮೂಲಕ ಅಣುಗಳು, ಸಾಮಾನ್ಯವಾಗಿ ಹೆಚ್ಚಿನ ಸಾರತೆಯ ಪ್ರದೇಶದಿಂದ, ಕಡಿಮೆ ಸಾರತೆಯ ಪ್ರದೇಶದ ಕಡೆಗೆ ಚಲಿಸುತ್ತಿದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಅಣುಗಳು ಕಡಿಮೆ ಸಾರತೆಯ ಸ್ಥಳದಿಂದ, ಹೆಚ್ಚಿನ ಸಾರತೆಯ ಸ್ಥಳಕ್ಕೆ ಶಕ್ತಿಯನ್ನು ವ್ಯಯಿಸಿ ಚಲಿಸುತ್ತದೆ. ಇದನ್ನು 'ಸಕ್ರಿಯ ಸಾಗಾಣಿಕೆ (active transport) ಎಂದು ಕರೆಯುತ್ತಾರೆ.

# ಸಸ್ಯ ಜೀವಕೋಶಗಳಲ್ಲಿ ಕೋಶಪೊರೆಯ ಜೊತೆಗೆ ಕೋಶಭಿತ್ತಿ ಇದೆ. ಕೋಶಭಿತ್ತಿಯು ಕೋಶಪೊರೆಯನ್ನು ಆವರಿಸಿರುವ ದಪ್ಪನಾದ, ಗಡುಸಾದ ಒಂದು ಹೊದಿಕೆ. ಇದು ಪ್ರಮುಖ ಸೆಲ್ಯುಲೋಸ್ ಎಂಬ ನಿರ್ಜೀವ ವಸ್ತುವಿನಿಂದಾಗಿದೆ. ಕೋಶಭಿತ್ತಿಯು ಜೀವಕೋಶಕ್ಕೆ ಆಕಾರ, ಆಧಾರ, ರಕ್ಷಣೆ ಮತ್ತು ದೃಢತೆಯನ್ನು ಕೊಡುತ್ತದೆ.

Thursday, 7 July 2016

ಜೀವಕೋಶಗಳ ಆಧ್ಯಯನ
ಕೆಲವು ಅನ್ವೇಷಕರ ಪ್ರಕಾರ ‘ಜೀವ’ ಎಂಬುದು ಪ್ರತಿಕ್ರಿಯೆ, ಪ್ರಚೋದನೆ, ಸಂತಾನೋತ್ಪತ್ತಿ ಮತ್ತು ಚಲನೆಯಂತಹ ಲಕ್ಷಣಗಳನ್ನು ಹೊಂದಿರುತ್ತದೆ.
# ಕೋಶಿಯ ಸ್ವರೂಪ: ಜೀವಿಗಳು ಜೀವಕೋಶವೆಂಬ ಅತ್ಯಂತ ಸೂಕ್ಮ ಮೂಲ ಘಟಕಗಳಾಗಿವೆ. ಉದಾ: ಆಹಾರ+ಆಮ್ಲಜನಕ-> ಶಕ್ತಿ.
# ಜೀವಿಗಳು ಆಮ್ಲಜನಕವನ್ನು ಸ್ವೀಕರಿಸಿ ಕಾರ್ಬನ್ ಡೈ ಆಕ್ಸೈಡ್ ನ್ನು ವಿಸರ್ಜಿಸುತ್ತವೆ. ಪ್ರಾಣಿಗಳಲ್ಲಿ ಉಸಿರಾಟಕ್ಕಾಗಿ ವಿವಿಧ ಅಂಗಗಳಿವೆ. ಅವುಗಳೆಂದರೆ, ಮನುಷ್ಯ-ಶ್ವಾಸಕೋಶಗಳು, ಮೀನಿನಲ್ಲಿ-ಕಿವಿರು, ಕಪ್ಪೆಯಲ್ಲಿ-ಚರ್ಮ, ಕೀಟಗಳಲ್ಲಿ-ಟ್ರೇಕಿಯಾ.
# ಜೀವಿಗಳಲ್ಲಿ ಶಕ್ತಿಗೆ ಮೂಲ ಆಹಾರ. ಕೆಲವು ಪ್ರಾಣಿಗಳು ಸಸ್ಯಗಳನ್ನು (ಸಸ್ಯಹಾರಿ) ಅವಲಂಭಿಸಿವೆ. ಇನ್ನೂ ಕೆಲವು ಪ್ರಾಣಿಗಳು ಮಾಂಸವನ್ನು (ಮಾಂಸಹಾರಿ)  ಅವಲಂಭಿಸಿವೆ. ಹಸಿರು ಸಸ್ಯಗಳು ದ್ಯುತಿ ಸಂಶ್ಲೇಷಣೆ ಕ್ರಿಯೆಯ ಮೂಲಕ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ.

ಅಪರಾವರ್ತ್ಯ ಪ್ರಕ್ರಿಯೆ
ಸೈಟೋಪ್ಲಾಸಂ ನಲ್ಲಿ ಒಮ್ಮೆ ಉಂಟಾದ ಹೆಚ್ಚಳ ಕಡಿಮೆ ಆಗದಿರಿವುದನ್ನು ಅಪರಾವರ್ತ್ಯ ಪ್ರಕ್ರಿಯೆ ಎನ್ನುವರು.
# ಜೀವಿಗಳಲ್ಲಿ ನಿರ್ದಿಷ್ಟ ಗಾತ್ರ ಮತ್ತು ಆಕಾರವಿದೆ. ಆದರೆ ಅವುಗಳ ಗಾತ್ರ ಮತ್ತು ಆಕಾರವು ಒಂದು ರೀತಿಯ ಜೀವಿಯಿಂದ ಇನ್ನೊಂದು ಜೀವಿಗಳಿಗೆ ವಿಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ನಿರ್ಜೀವಿಗಳಿಗೆ ನಿರ್ಧಿಷ್ಟ ಗಾತ್ರ ಮತ್ತು ಆಕಾರವಿರುವುದಿಲ್ಲ. ಆದರೆ ವಜ್ರ, ಅಯೋಡಿನ್ ಅಡಿಗೆ ಉಪ್ಪಿನಂತಹ ರಾಸಾಯನಿಕ ಹರಳುಗಳಿಗೆ ನಿರ್ಧಿಷ್ಟ ಆಕಾರವಿರುತ್ತದೆ.
# ಜೀವಿಗಳಲ್ಲಿ ಚಲಿಸುವ ಸಾಮರ್ಥ್ಯವಿದೆ. ಆದರೆ ಹವಳ, ಸ್ಪಂಜು ಮತ್ತು ಸಮುದ್ರದ ಅನಿಮೋನುಗಳಂತಹ ಕೆಲವು ಪ್ರಾಣಿಗಳು ಚಲಿಸುವುದಿಲ್ಲ. ಕ್ಲಾಮಿಡೋ ಮೊನಾಸ್, ವಾಲ್ವಾಕ್ಸ್ ಗಳಂತಹ ಕೆಲವು ಶೈವಲಗಳಲ್ಲಿ ಇಡೀ ದೇಹ ಚಲಿಸುತ್ತದೆ. ಬಹುತೇಕ ಸಸ್ಯಗಳಲ್ಲಿ ಚಲನೆಯು ಕೆಲವು ಭಾಗಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಅವುಗಳಲ್ಲಿನ ಈ ಚಲನೆಗಳು ಬಾಹ್ಯ ಪ್ರಚೋದನೆ ಗಳಿಂದಾಗುತ್ತವೆ. ಕಲ್ಲು , ಲೇಖನಿ, ಕಾಗದದ ಚೂರು ಗಳಂತಹ ನಿರ್ಜೀವಿಗಳು, ಬಾಹ್ಯಬಲದ ಸಹಾಯವಿಲ್ಲದೆ ಚಲಿಸಲಾರವು .
ಪ್ರಾಣಿಗಳಲ್ಲಿ ಚಲನೆಗಾಗಿ ಇರುವ ನಿರ್ದಿಷ್ಟ ರಚನೆಗಳು
  • ಹಸು - ಕಾಲು
  • ಪಕ್ಷಿ – ರೆಕ್ಕೆ
  • ಹೈಡ್ರಾ – ಕರಬಳ್ಳಿ
  • ಪ್ಯಾರಮೀಸಿಯಂ – ಲೋಮಾಂಗ
  • ಯೂಗ್ಲಿನ್ – ಕಶಾಂಗ
  • ಅಮಿಬಾ – ಮಿಥ್ಯಾಪಾದ
 # ಪ್ರತಿಯೊಂದು ಜೀವಿಗಳು ತಮ್ಮ ಸುತ್ತ ಮುತ್ತಲಿನ ವಾತಾವರಣದಲ್ಲಿ ನಡೆಯುವ ಬದಲಾವಣೆಗಳಿಗೆ ಪ್ರತಿಕ್ರಿಯಿಸುತ್ತವೆ. ಸುತ್ತಮುತ್ತ ನಡೆಯುವ ಬದಲಾವಣೆಯೇ ಪ್ರಚೋದನೆ. ಪ್ರಚೋದನೆಗೆ ಪ್ರತಿಯಾಗಿ ವ್ಯಕ್ತವಾಗುವ ಕ್ರಿಯೆಗೆ ಪ್ರತಿಕ್ರಿಯೆ ಎನ್ನುವರು.  ಪ್ರಚೋದನೆಗಳಿಗೆ ಉದಾಹರಣೆ ಶಬ್ಧ, ಬೆಳಕು, ಒತ್ತಡ ಇತ್ಯಾದಿ.
ಪ್ರಚೋದನೆ ಪ್ರತಿಕ್ರಿಯೆಗೆ ಉದಾ:
  1. ಮುಟ್ಟಿದ ಮುನಿ ಸಸ್ಯದ ಎಲೆಗಳು ಮುಟ್ಟಿದ ತಕ್ಷಣ ಮುಚ್ಚಿಕೊಳ್ಳುತ್ತವೆ.
  2. ಸಹಸ್ರಪಧಿಯನ್ನು ಮುಟ್ಟಿದ ತಕ್ಷಣ ಅದು ತನ್ನ ದೇಹವನ್ನು ಸುತ್ತಿಕೊಳ್ಳುತ್ತದೆ.
  3. ಸೂರ್ಯಕಾಂತಿ ಹೂ ಗಳು ಸೂರ್ಯನ ಕಡೆಗೆ ತಿರುಗುತ್ತವೆ.

kannada