ಕನ್ನಡ ವರ್ಣಮಾಲೆ
ನಮ್ಮ ಆಧುನಿಕ ಕನ್ನಡ ವರ್ಣಮಾಲೆಯಲ್ಲಿ ಒಟ್ಟು ೪೯ ಅಕ್ಷರಗಳಿವೆ. ಅವುಗಳೆಂದರೆ:-
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ
ಕ್ ಖ್ ಗ್ ಘ್ ಙ್
ಚ್ ಛ್ ಜ್ ಝ್ ಞ್
ಟ್ ಠ್ ಡ್ ಢ್ ಣ್
ತ್ ಥ್ ದ್ ಧ್ ನ್
ಪ್ ಫ್ ಬ್ ಭ್ ಮ್
ಯ್ ರ್ ಲ್ ವ್ ಶ್ ಷ್ ಸ್ ಹ್ ಳ್
ಅಕ್ಷರಗಳ ವರ್ಗೀಕರಣ

ಕನ್ನಡ ವರ್ಣಮಾಲೆಯಲ್ಲಿ ೪೯ ಅಕ್ಷರಗಳಿದ್ದು, ವರ್ಣಮಾಲೆಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ:-
ಸ್ವರಗಳು (೧೩)
ವ್ಯಂಜನಗಳು (೩೪)
ಯೋಗವಾಹಗಳು (೦೨)
ಸ್ವರಗಳು (೧೩):- ಸ್ವತಂತ್ರವಾಗಿ ಉಚ್ಚರಿಸಲಾಗುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತ್ತಾರೆ.
ಕನ್ನಡದಲ್ಲಿರುವ ಒಟ್ಟು ಸ್ವರಗಳ ಸಂಖ್ಯೆ ೧೩, ಅವುಗಳೆಂದರೆ
ಅ ಆ ಇ ಈ ಉ ಊ ಋ ಎ ಏ ಒ ಓ ಔ
ಸ್ವರಗಳಲ್ಲಿ ಎರೆಡು ವಿಧ. ಅವುಗಳೆಂದರೆ:-
ಹ್ರಸ್ವಸ್ವರ (೦೬)
ದೀರ್ಘಸ್ವರ (೦೭)
ಹ್ರಸ್ವಸ್ವರಗಳು :- ಒಂದು ಮಾತ್ರೆಯ ಕಾಲದಲ್ಲಿ ಅಥವ ಕಡಿಮೆ ಸಮಯದಲ್ಲಿ ಉಚ್ಚರಿಸುವ ಅಕ್ಷರಗಳನ್ನು ಹ್ರಸ್ವಸ್ವರಗಳು ಎನ್ನುವರು.
ಕನ್ನಡದಲ್ಲಿರುವ ೬ ಹ್ರಸ್ವಸ್ವರಗಳೆಂದರೆ : ಅ ಇ ಉ ಋ ಎ ಒ
ದೀರ್ಘಸ್ವರಗಳು :- ದೀರ್ಘವಾಗಿ ಅಂದರೆ ಎರೆಡು ಮಾತ್ರೆಯ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳನ್ನು ದೀರ್ಘಸ್ವರಗಳು ಎನ್ನುವರು.
ಕನ್ನಡ ವರ್ಣಮಾಲೆಯಲ್ಲಿರುವ ೭ ದೀರ್ಘಸ್ವರಗಳೆಂದರೆ : ಆ ಈ ಊ ಏ ಐ ಓ ಔ
ಸಂಧ್ಯಾಕ್ಷರಗಳು :- ಎರೆಡು ಬೇರೆ ಬೇರೆ ಸ್ವರಗಳ ಸಂಯೋಗದಿಂದ ಉಂಟಾಗುವ ದೀರ್ಘ ಸ್ವರಗಳಿಗೆ ’ಸಂಧ್ಯಾಕ್ಷರಗಳು’ ಎನ್ನುವರು.
ಕನ್ನಡದಲ್ಲಿ ’ಐ’ ಮತ್ತು ’ಔ’ ಎಂಬೆರಡು ಸಂಧ್ಯಾಕ್ಷರಗಳಿದ್ದು ’ಅ, ಇ’ ಎಂಬ ಸ್ವರಗಳ ಸಂಯೋಗದಿಂದಲೂ, ’ಔ’ ಎಂಬ ಸಂಧ್ಯಾಕ್ಷರವು ’ಅ, ಉ’ ಎಂಬ ಸ್ವರಗಳ ಸಂಯೋಗದಿಂದಲೂ ಉಂಟಾಗುವುದು.
ವ್ಯಂಜನಗಳು (೩೪) :- ಸ್ವರಗಳ ಸಹಾಯದಿಂದ ಸ್ಪಷ್ಟವಾಗಿ ಉಚ್ಚರಿಸಲ್ಪಡುವ ವರ್ಣಗಳಿಗೆ ವ್ಯಂಜನಗಳು ಎನ್ನುವರು.
ವ್ಯಂಜನಗಳಲ್ಲಿ ಎರೆಡು ವಿಧಗಳಿವೆ. ಅವುಗಳೆಂದರೆ :-
೧) ವರ್ಗೀಯ ವ್ಯಂಜನಗಳು. (೨೫)
೨) ಅವರ್ಗೀಯ ವ್ಯಂಜನಗಳು. (೦೯)
ವರ್ಗೀಯ ವ್ಯಂಜನಗಳು :
ವರ್ಗ ಎಂದರೆ ಗುಂಪು, ಸಮೂಹ ಎಂದರ್ಥ. ಒಂದು ನಿರ್ದಿಷ್ಟ ವರ್ಗಕ್ಕೆ ಸೇರಿದ ಅಕ್ಷರಗಳನ್ನು ವರ್ಗೀಯ ವ್ಯಂಜನ ಎನ್ನುವರು.
ಕನ್ನಡದಲ್ಲಿ ಒಟ್ಟು ೨೫ ವರ್ಗೀಯ ವ್ಯಂಜನಗಳಿವೆ. ಅವುಗಳೆಂದರೆ :-
ಕ್ ಖ್ ಗ್ ಘ್ ಙ್ - ’ಕ’ ವರ್ಗ.
ಚ್ ಛ್ ಜ್ ಝ್ ಞ್ - ’ಚ’ ವರ್ಗ.
ಟ್ ಠ್ ಡ್ ಢ್ ಣ್ - ’ಟ’ ವರ್ಗ.
ತ್ ಥ್ ದ್ ಧ್ ನ್ - ’ತ’ ವರ್ಗ.
ಪ್ ಫ್ ಬ್ ಭ್ ಮ್ - ’ಪ’ ವರ್ಗ.
’ಕ’ ವರ್ಗದ ವ್ಯಂಜನಗಳು ಗಂಟಲಿನಿಂದ, ’ಚ’ ವರ್ಗದ ವ್ಯಂಜನಗಳು ಅಂಗುಳದಿಂದ, ’ಟ್’ ವರ್ಗದ ವ್ಯಂಜನಗಳು ಒಳಬಾಯಿಯ ಮೇಲ್ಬಾಗದಿಂದ, ’ತ’ ವರ್ಗದ ವ್ಯಂಜನಗಳು ಹಲ್ಲುಗಳಿಂದ, ’ಪ’ ವರ್ಗದ ವ್ಯಂಜನಗಳು ತುಟಿಯಿಂದಲೂ ಉಚ್ಚರಿಸಲ್ಪಡುತ್ತವೆ.
ವರ್ಗೀಯ ವ್ಯಂಜನಗಳಲ್ಲಿ ನಾವು ಮೂರು ವಿಧಗಳನ್ನು ಕಾಣುತ್ತೇವೆ. ಅವುಗಳೆಂದರೆ :-
೧) ಅಲ್ಪಪ್ರಾಣಗಳು : ಕಡಿಮೆ ಉಸಿರಿನ ಸಹಾಯದಿಂದ ಉಚ್ಚರಿಸಲ್ಪಡುವ ವರ್ಗೀಯ ವ್ಯಂಜನಗಳಿಗೆ ’ಅಲ್ಪಪ್ರಾಣಗಳು’ ಎನ್ನುವರು.
ಕನ್ನಡದಲ್ಲಿ ’ ಕ್, ಗ್, ಚ್, ಜ್, ಟ್, ಡ್, ತ್, ದ್, ಪ್, ಬ್ ’ ಎಂಬ ೧೦ ಅಲ್ಪಪ್ರಾಣಗಳಿರುವವು.
೨) ಮಹಾಪ್ರಾಣಗಳು: ಹೆಚ್ಚು ಉಸಿರಿನ ಸಹಾಯದಿಂದ ಉಚ್ಚರಿಸಲ್ಪಡುವ ವರ್ಗೀಯ ವ್ಯಂಜನಗಳಿಗೆ ’ಮಹಾಪ್ರಾಣಗಳು’ ಎನ್ನುವರು.
ಕನ್ನಡದಲ್ಲಿ ’ ಖ್, ಘ್, ಛ್, ಝ್, ಠ್, ಢ್, ಥ್, ಧ್, ಫ್, ಭ್ ’ ಎಂಬ ೧೦ ಮಹಾಪ್ರಾಣಾಕ್ಷರಗಳಿವೆ.
೩) ಅನುನಾಸಿಕಗಳು : ಮೂಗಿನ ಸಹಾಯದಿಂದ ಉಚ್ಚರಿಸಲ್ಪಡುವ ವರ್ಗೀಯ ವ್ಯಂಜನಗಳಿಗೆ ಅನುನಾಸಿಕಗಳು ಎನ್ನುವರು.
ಕನ್ನಡದಲ್ಲಿ ’ ಙ್, ಞ್, ಣ್, ನ್, ಮ್ ’ ಎಂಬ ೫ ಅನುನಾಸಿಕಗಳು ಇವೆ.
ಯೋಗವಾಹಗಳು :- ’ಯೋಗ’ ಎಂದರೆ ಸಂಬಂಧವನ್ನು , ’ವಾಹ’ ಎಂದರೆ ಹೊಂದಿರವುದು ಎಂದರ್ಥ.
ಕನ್ನಡದಲ್ಲಿ ಎರೆಡು ಯೋಗವಾಹಗಳಿವೆ. ಅವುಗಳೆಂದರೇ
ಅಂ - ಅನುಸ್ವಾರ
ಅ: - ವಿಸರ್ಗ
No comments:
Post a Comment