ಜೀವಕೋಶ ಅಧ್ಯಯನ
# ಜೀವಕೋಶಗಳು ಜೀವಿಯಾ ಒಟ್ಟಾರೆ ಅಭಿವೃದ್ಧಿಗೆ ಸಹಕರಿಸುವಂತಹ, ಪೋಷಣೆ, ಉಸಿರಾಟ ಮತ್ತು ಕೋಶ ವಿಭಜನೆಗಳಂತಹ ಕಾರ್ಯಗಳನ್ನು ನಿರ್ವಹಿಸುತ್ತವೆ. ಆದ್ದರಿಂದ, ಜೀವಕೋಶಗಳು ಜೀವಿಯ ರಚನಾತ್ಮಕ ಮತ್ತು ಕಾರ್ಯಾತ್ಮಕ ಮೂಲ ಘಟಕ.
# ಬಹಹುಕೋಶಿಯ ಜೀವಿಗಳಲ್ಲಿ ಜೀವಕೋಶಗಳು ಕೆಲವು ನೂರುಗಳಿಂದ ಹಲವು ಬಿಲಿಯನ್ ಗಳವರೆಗೂ ಇರಬಹುದು.
ವಯಸ್ಕ ಮಾನವನ ದೇಹದಲ್ಲಿ ಅನೇಕ ಟ್ರಿಲಿಯನ್ ಜೀವಕೋಶಗಳಿರುತ್ತವೆ.
1 ಮಿಲಿಯನ್ = 10,00,000 (106 )
1 ಬಿಲಿಯನ್ = 1000,000,000 (109 )
1 ಟ್ರಿಲಿಯನ್ = 1000,000,000,000 (1012 )
# ಜರ್ಮನಿಯ ಸಸ್ಯಶಾಸ್ತ್ರಜ್ಙ ಶ್ಲೀಡನ್ ಮತ್ತು ಪ್ರಾಣಿಶಾಸ್ತ್ರಜ್ಙ ಪ್ವಾನ್ ಒಟ್ಟಾಗಿ 1839 ರಲ್ಲಿ"ಜೀವಕೋಶ ಸಿದ್ಧಾಂತ' ವನ್ನು ಮಂಡಿಸಿದರು.
ಸಿದ್ಧಾಂತದ ಪ್ರಕಾರ:
1. ಜೀವಿಗಳ ದೇಹವು ಒಂದು ಅಥವಾ ಹೆಚ್ಚು ಜೀವಕೋಶಗಳಿಂದಾಗಿವೆ.
2. ಹೊಸ ಜೀವಕೋಶಗಳು ಈಗಾಗಲೇ ಅಸ್ತಿತ್ವದಲ್ಲಿರುವ ಜೀವಕೋಶಗಳ ವಿಭಜನೆಯಿಂದ ಹುಟ್ಟುತ್ತವೆ.
# ಜೀವಕೋಶಗಳು ಬರೀಗಣ್ಣಿಗೆ ಕಾಣಿಸುವುದಿಲ್ಲ. ಅವನ್ನು ಸೂಕ್ಷದರ್ಶಕದ ಮೂಲಕ ನೋಡಬೇಕು. ಜೀವಕೋಶಗಳ ಗಾತ್ರವನ್ನು ಅಳೆಯಲು "ಮೈಕ್ರಾನ್" ಅನ್ನು ಬಳಸುತ್ತೇವೆ. ಒಂದು ಮೈಕ್ರಾನ್ 1/1000 ಮಿಲಿಮೀಟರ್ ಗೆ ಸಮ.
# ಕೋಶಪೂರೆ : ಜೀವಕೋಶವು ಕೋಶಪೊರೆಯಿಂದ ಆವೃತವಾಗಿದೆ ಇದನ್ನು ಪ್ಲಾಸ್ಮಾಪೊರೆ ಎಂದು ಕರೆಯಯುವರು. ಇದು ಜೀವಕೋಶದ ಒಳಗಿನ ಭಾಗಗಳನ್ನು ಹೊರಗಿನ ಪರಿಸರದಿಂದ ಬೇರ್ಪಡಿಸುತ್ತದೆ. ಜೀವಕೋಶದ ನಿರ್ದಿಷ್ಟ ಆಕಾರವನ್ನು ಕಾಪಾಡುತ್ತದೆ. ಈ ಪೊರೆಯು ಕೋಶದ ಹೊರಹೋಗುವ ಮತ್ತು ಒಳಬರುವ ವಸ್ತುಗಳ ಚಲನೆಯನ್ನು ನಿಯಂತ್ರಿಸುತ್ತದೆ. ಆದ್ದರಿಂದ ಈ ಪೊರೆಯನ್ನು 'ಅರೆಪಾರಕ ಪೊರೆ' (semipermeable membrane) ಎನ್ನುವರು.
# ಜೀವಕೋಶಗಳು ಪ್ಲಾಸ್ಮಾಪೊರೆಯ ಮೂಲಕ ಅಣುಗಳು, ಸಾಮಾನ್ಯವಾಗಿ ಹೆಚ್ಚಿನ ಸಾರತೆಯ ಪ್ರದೇಶದಿಂದ, ಕಡಿಮೆ ಸಾರತೆಯ ಪ್ರದೇಶದ ಕಡೆಗೆ ಚಲಿಸುತ್ತಿದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಅಣುಗಳು ಕಡಿಮೆ ಸಾರತೆಯ ಸ್ಥಳದಿಂದ, ಹೆಚ್ಚಿನ ಸಾರತೆಯ ಸ್ಥಳಕ್ಕೆ ಶಕ್ತಿಯನ್ನು ವ್ಯಯಿಸಿ ಚಲಿಸುತ್ತದೆ. ಇದನ್ನು 'ಸಕ್ರಿಯ ಸಾಗಾಣಿಕೆ (active transport) ಎಂದು ಕರೆಯುತ್ತಾರೆ.
# ಸಸ್ಯ ಜೀವಕೋಶಗಳಲ್ಲಿ ಕೋಶಪೊರೆಯ ಜೊತೆಗೆ ಕೋಶಭಿತ್ತಿ ಇದೆ. ಕೋಶಭಿತ್ತಿಯು ಕೋಶಪೊರೆಯನ್ನು ಆವರಿಸಿರುವ ದಪ್ಪನಾದ, ಗಡುಸಾದ ಒಂದು ಹೊದಿಕೆ. ಇದು ಪ್ರಮುಖ ಸೆಲ್ಯುಲೋಸ್ ಎಂಬ ನಿರ್ಜೀವ ವಸ್ತುವಿನಿಂದಾಗಿದೆ. ಕೋಶಭಿತ್ತಿಯು ಜೀವಕೋಶಕ್ಕೆ ಆಕಾರ, ಆಧಾರ, ರಕ್ಷಣೆ ಮತ್ತು ದೃಢತೆಯನ್ನು ಕೊಡುತ್ತದೆ.
No comments:
Post a Comment